ಮನುಷ್ಯನ್ಯಾಕೆ ಹೀಗೆ?

ದೇವರು ಒಂದು ದಿನ ಕತ್ತೇನ ಸೃಷ್ಠಿಸಿ ಅದರ ಹತ್ತಿರ ಹೇಳಿದ. ನೀನು ಒಂದು ಕತ್ತೆ ಬೆಳಗಿನಿಂದ ಸಾಯಂಕಾಲದ ವರೆಗೆ ನೀ ದುಡಿಯ ಬೇಕು ನಿನ್ನ ಬೆನ್ನ ಮೇಲೆ ಭಾರ ಇರುತ್ತೆ. ನೀನು ಹುಲ್ಲನ್ನೇ ತಿನ್ನಬೇಕು ನಿನಗೆ ಅಷ್ಟೊಂದು ಬುದ್ದಿ ಇರುವುದಿಲ್ಲ, ನೀನು ೫೦ ವರ್ಷಗಳ ಕಾಲ ಬಾಳುತ್ತೀಯ..

ಇದಕ್ಕೆ ಕತ್ತೆ ಹೇಳಿತು ನಾನು ಕತ್ತೆಯಾಗಿ ಇರುತ್ತೇನೆ ಆದರೆ ೫೦ ವರ್ಷ ಹೆಚ್ಚು , ನನಗೆ ೨೦ ವರ್ಷ ಸಾಕು ಎಂದು ಕೇಳಿಕೊಂಡಿತು.  ದೇವರು ಕತ್ತೆಯ ಆಸೆಯನ್ನ ನೆರವೇರಿಸಿದ.

ಆನಂತರ ಒಂದು ನಾಯಿಯನ್ನ ಸೃಷ್ಠಿಸಿ, ಅದರ ಬಳಿ ಹೇಳಿದ, ನೀ ಮನುಜನ ಮನೆಯನ್ನ ಕಾಯುವ ಕಾವಲುಗಾರ, ಅವನ ಪ್ರೀತಿಗೆ ಪಾತ್ರನಾಗಿ ಇರುತ್ತೀಯ, ಅವನು ಉಂಡ ನಂತರ ನಿನಗೆ ನೀಡುತ್ತಾನೆ. ನೀ ೩೦ ವರ್ಷಗಳ ಕಾಲ ಬಾಳುತ್ತೀಯ.

ಅದಕ್ಕೆ ನಾಯಿ ಹೇಳಿತು ದೇವರೆ ೩೦ ವರ್ಷ ತುಂಬ ಹೆಚ್ಚು, ನನಗೆ ೧೫ ವರ್ಷ ಸಾಕು, ಎಂದು ಕೇಳಿಕೊಂಡಿತು. ದೇವರು ನಾಯಿಯ ಆಸೆಯನ್ನ ನೆರವೇರಿಸಿದ.

ಆನಂತರ ದೇವರು ಕೋತಿಯನ್ನ ಸೃಷ್ಠಿಸಿ ಅದರ ಬಳಿ ಹೇಳಿದ. ನೀ ಒಂದು ಕೋತಿ ಮರಕ್ಕೆ ಮರ ಜಿಗಿಯಬೇಕು, ನೀ ಆಟಗಳನ್ನ ತೋರಿಸಿ ಜನರಲ್ಲಿ ಸಂತಸವನ್ನ ಮೂಡಿಸು, ನೀ ೨೦ ವರ್ಷಗಳ ಕಾಲ ಬಾಳುತ್ತಿಯ.

ಅದಕ್ಕೆ ಕೋತಿ ಹೇಳಿತು ೨೦ ವರ್ಷ ತುಂಬ ಹೆಚ್ಚು ೧೦ ವರ್ಷ ಸಾಕು ಎಂದು ಕೇಳಿಕೊಂಡಿತು.  ದೇವರು ಕೋತಿಯ ಆಸೆಯನ್ನ ನೆರವೇರಿಸಿದ.

ಆನಂತರ ಕೊನೆಯದಾಗಿ ಮನುಜರನ್ನ ಸೃಷ್ಠಿಸಿ ಅವನ ಬಳಿ ಹೇಳಿದ. ನೀನೊಬ್ಬ ಮನುಜ ಪ್ರಪಂಚದಲ್ಲಿನ ಆರು ಬುದ್ದಿಗಳನ್ನ ಪಡೆದು ಉಳಿದ ಪ್ರಾಣಿಗಳನ್ನ ಆಳುತ್ತೀಯ, ಪ್ರಪಂಚವೇ ನಿನ್ನ ಕೈಯಲ್ಲಿ, ನೀನು ೨೦ ವರ್ಷಗಳ ಕಾಲ ಬಾಳುತ್ತೀಯ.

ಅದಕ್ಕೆ ಮನುಜ ಹೇಳಿದ ೨೦ ವರ್ಷ ಎಂಬುದು ನನಗೆ ತುಂಬ ಕಡಿಮೆ. ಕತ್ತೆ ಬೇಡ ಎಂದ ೩೦ ವರ್ಷಗಳನ್ನ, ನಾಯಿ ಬೇಡ ಎಂದ ೧೫ ವರ್ಷಗಳನ್ನ, ಕೋತಿ ಬೇಡ ಎಂದ ೧೦ ವರ್ಷಗಳನ್ನ, ನನಗೆ ಕೊಟ್ಟು ಬಿಡು. ದೇವರು ಮನುಜನ ಆಸೆಯನ್ನ ನೆರವೇರಿಸಿದ…

ಅಂದಿನಿಂದ ಮನುಜ ಮೊದಲ ೨೦ ವರ್ಷಗಳನ್ನ ಸಂತೋಷದಿಂದ ಬಾಳುತ್ತಾನೆ ಮನುಜನಾಗಿ.

ಮದೆವೆಯಾಗಿ ಆನಂತರದ ೩೦ ವರ್ಷಗಳನ್ನ ಕತ್ತೆಯಾಗಿ ಎಲ್ಲಾ ಹೊಣೆಗಳನ್ನ ಎತ್ತಿ ಹಿಡಿದು ಹಗಲು ರಾತ್ರಿ ನೋಡದೆ ದುಡಿಯುತ್ತಾನೆ.

ಮಕ್ಕಳು ಬೆಳೆದು ದೊಡ್ಡವರಾದ ನಂತರ ೧೫ ವರ್ಷಗಳಿಗೆ ಅವನು ಮನೆಯ ನಾಯಾಗಿ ಇದ್ದು ಎಲ್ಲರನ್ನ ಕಾಯುತ್ತಾನೆ, ಎಲ್ಲರೂ ತಿಂದು ಮಿಕ್ಕಿದ್ದನ್ನ ತಿಂದು ಬದುಕುತ್ತಾನೆ.

ನಂತರ ವಯಸ್ಸಾಗಿ ನಿವೃತ್ತಿ ಹೊಂದಿದ ನಂತರ ಕೋತಿಯ ಹಾಗೆ ೧೦ ವರ್ಷಗಳಿಗೆ ಮಗನ ಮನೆಯಿಂದ ಮಗಳ ಮನೆಗೆ ಮಗಳ ಮನೆಯಿಂದ ಮಗನ ಮನೆಗೆ ಜಿಗಿಯುತ್ತ ತನ್ನ ಮೊಮ್ಮಕ್ಕಳಿಗೆ ಆಟಗಳನ್ನ ತೋರಿಸಿ ಸಂತಸಪಡಿಸುತ್ತಾನೆ.

ಈಗ ತಿಳಿಯಿತೇ ನಾವು ಏಕೆ ಹೀಗಿರುವೆವು ಎಂದು…..

ನಿಮ್ಮ ಟಿಪ್ಪಣಿ ಬರೆಯಿರಿ