
ಅವನಿರುವುದು ಫುಟ್ಪಾತಿನಲ್ಲಿ. ಎರಡು ಕಡೆಯಿಂದಲೂ ಟ್ರೈನ್ ಶತ ವೇಗದಲ್ಲಿ ಓಡುತ್ತಿದೆ. ನಡುವಲ್ಲಿ ಸ್ಥಗಿತವಾಗಿರುವ ಟ್ರೈನಿನಲ್ಲಿ ಅವನು ಮಲಗಿ ನಿದ್ರಿಸುತ್ತಿದ್ದಾನೆ. ಅವನ ನಿದ್ರೆ ಕೂಡಾ ಅದರಷ್ಟೇ ವೇಗದಲ್ಲಿದೆ. ಟ್ರೈನಿನ ಸದ್ದಿನಲ್ಲಿ ಅವನು ಗೊರಕೆ ಹೊಡೆಯುವ ಸದ್ದು ಸ್ಪಷ್ಟವಾಗಿ ಕೇಳಿಸುತ್ತಿಲ್ಲ. ಅವನಿಗೆ ರೋಗ ಹತ್ತುವುದಿಲ್ಲ. ನೊಣ ಕಚ್ಚುವುದಿಲ್ಲ. ಜಿಮ್ ಗೆ ಹೋಗದೇ ಸಿಕ್ಸ್ ಪಾಕನ್ನೂ ತನ್ನದಾಗಿಸಿ ಕೊಂಡಿದ್ದಾನೆ. ವೇದನೆ, ಯಾತನೆ, ದುಖಃ, ನೋವು ಒಂದೂ ಅವನ ಮುಖದಲ್ಲಿಲ್ಲ. ಯಾರದೋ ನೆರಳಿನಲ್ಲಿ ಕೆಲಸಮಾಡಿ ಅಂದಿಗೆ ಬೇಕಾದುದನ್ನು ಅಂದೇ ಸಂಪಾದಿಸಿ ಕೈತೊಳೆದುಕೊಳ್ಳುತ್ತಾನೆ. ಬೆಳಗೆಯಾಗುವ ಮುನ್ನ ಎಚ್ಚೆತ್ತು ಕೊಳ್ಳುತ್ತಾನೆ. ರಾತ್ರಿಗೂ ಮುನ್ನ ನಿದ್ದೆ ಮಾಡುತ್ತಾನೆ. ಎರಡು ಮೂರು ದಿನದಿಂದ ವೀಕ್ಷಿಸುತ್ತಿದ್ದ ನನಗೆ ಅಚ್ಚರಿಯಾಯಿತು. ಫ್ಲಾಟ್ ಫಾರ್ಮಿನ ಬಳಿ ಕೂತ ಕ್ಷಣ ಮಾತ್ರಕ್ಕೆ ಕೊದು ಗಳ ಗುಂಪೊಂದು ನನ್ನ ಕಾಲನ್ನು ಸುತ್ತಿಕೊಳ್ಳುತ್ತಿತ್ತು. ಅವನು ಮತ್ತು ನನ್ನ ನಡುವೆ ಬೇದ ಬಾವ ತೋರಲು ಕುದುವಿಗೆ ಮನಸ್ಸಾದರೂ ಯಾಕೆ ಬಂತು? ಎಲ್ಲದಕ್ಕೂ ವಿಚಿತ್ರ ಅನ್ನಿಸಿದ್ದು ಅವನ ನಿದ್ದೆಯಾಗಿತ್ತು. “ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ ” ಎಂಬ ಗಾದೆಯ ಅರ್ಥ ಇವನೇ ಆಗಿರಬೇಕು ಎಂದು ಅನಿಸುತ್ತಿತ್ತು. ಸಿಕ್ಕಿದ ಇಂತಿಷ್ಟು ಹಣದಲ್ಲಿ ಇವನ ಜೀವನ ಸಾಗುತ್ತಿದೆ. ಅವನು ಏನನ್ನು ಸ್ವಂತವಾಗಿಸಿ ಕೊಂಡಿಲ್ಲ. ಯಾರ ನೋವಿಗೂ ಯಾರ ತಂಟೆಗೂ ಇವನು ಅಡ್ಡಿಯಾಗದೆ ತಾನಾಯ್ತು ತನ್ನ ಪಾಡಾಯ್ತು ಎಂದು ಜೀವಿಸುತ್ತಿದ್ದಾನೆ.

ಹಣವೇ ಮೇಲೆಂದು ಭಾವಿಸಿದವರಿಗೆ ಇವನೊಂದು ಸೂಕ್ತ ಉದಾಹರಣೆಯಾಗಿದೆ. ಹಣ ಬೇಕು ಜೀವಿಸಲು ಆದರೆ ಹಣವೇ ಜೀವನವಾಗಬಾರದು. ಹಣಗಳಿಸುವ ಬ್ಯುಸಿ ಜೀವನದಲ್ಲಿ ಕೆಲವರ ನಿದ್ದೆ, ಸಂತೋಷ, ನೆಮ್ಮದಿ, ಆನಂದ, ಸಂಬಂಧಗಳು ಕ್ಷೀಣಿಸುತ್ತಲಿರುತ್ತದೆ. ಧನಿಕನು ಏಸಿ ರೂಮಲ್ಲಿ ಮಲಗಿದ್ದರು ಒಂತರಾ ನಿದ್ರಾಹೀನತೆ ಕಾಡ ತೊಡಗುತ್ತದೆ. ನಾಲ್ಕು ಕಡೆಯಿಂದಲೂ ಟೆನ್ಷನ್ ಗಳ ಕಾಟ ಇನ್ನೂ ಹಲವು ಪ್ರಾಬ್ಲಮ್ ಗಳು ಇವನ ನೆಮ್ಮದಿಯನ್ನು ತಿನ್ನತೊಡಗುತ್ತದೆ. ಗಳಿಸಿದ ಹಣದಲ್ಲಿ ನ್ಯಾಯ ನೆಮ್ಮದಿಗಳಿಲ್ಲದಿದ್ದರೆ ಮತ್ತೆಷ್ಟು ಗಳಿಸಿದ್ದರು ಏನು ಲಾಭ? ಚಿಂತೆಯಲ್ಲೇ ಚಿತೆಯಾಗುತ್ತಿರುವ ಇವನ ಜೀವನಕ್ಕಿಂತ ಅವನ ನಿದ್ದೆಯೆಷ್ಟು ವಾಸಿಯಲ್ಲವಾ? ಪ್ರಸ್ತುತ ವರ್ತಮಾನವು ಹಣಕ್ಕಾಗಿ ಅಡ್ಡದಾರಿಗಳನ್ನು ಕಂಡುಕೊಳ್ಳುವ ಜನರು ಹೆಚ್ಚಾಗುತ್ತಿದೆ. ಆಸ್ತಿಗಾಗಿ ಕುಟುಂಬಗಳು ದೂರವಾಗುತ್ತಿದೆ. ಮಾತಾಪಿತರು ಅನ್ಯರಾಗುತ್ತಿದ್ದಾರೆ. ಹೆಣ್ಣು ವ್ಯವಹಾರದ ಸರಕಾಗುತ್ತಿದ್ದಾಳೆ. ಮಾನ ಮಾರಾಟವಾಗುತ್ತಿದೆ. ಅಧಿಕಾರಿಗಳು ಭ್ರಷ್ಟಾಚಾರವನ್ನು ಕೆಲಸವಾಗಿಸಿಕೊಂಡಿದ್ದಾರೆ. ಹಣದ ಮುಂದೆ ನ್ಯಾಯ ಮೂಕವಾಗುತ್ತಿದೆ. ಅಪರಾಧಿ ನಿರಪರಾಧಿ ಯಾಗುತ್ತಾನೆ. ದರೋಡೆ, ಕೊಲೆ, ಸುಳಿಗೆ ಗಳು ದಾಪುಗಾಲಿಡುತ್ತಿದೆ. ಅಪರಾಧ ಗಳು ಮನೆಮಾಡಿಕೊಂಡಿವೆ. ದುಡ್ಡೇ ದೊಡ್ಡಪ್ಪನಾಗಿ ಬಾಕಿಯೆಲ್ಲವು ಅದರ ಮಕ್ಕಳಾಗುತ್ತಿದೆ. ಆದರೆ ಇದರ ಮುಂದೆ ಪ್ರೀತಿ, ಸ್ನೇಹ, ಸಹನೆ, ಮಾನವೀಯತೆ, ವಿಶ್ವಾಸ, ಧಾರ್ಮಿಕತೆ ಗಳೆಲ್ಲವೂ ಮಾಯವಾಗುತ್ತಿದೆ. ಹಣವೊಂದೇ ಗುರಿ ಬಾಕಿಯೆಲ್ಲವೂ ಆಡುಮಾತಿಗೇ ಸೀಮಿತ ಗೊಳ್ಳುತ್ತಿದೆ.

ಓದನ್ನು ಮುಂದುವರೆಸಿ →