About me

image

ನಾನು ನಾನೆ. ಕಾಸಿಂ ಎಂ.ಕೆ… ನನ್ನ ಕುರಿತು ಹೆಚ್ಚೇನೂ ಹೇಳಲಿಕ್ಕಿಲ್ಲ. ಬದುಕೆಂಬ ದೋಣಿಯನು ಮುಂದೆ ಸಾಗಿಸಲು ಹಲವು ಮುಕವಾಡಗಳನ್ನು ಧರಿಸಿ ಗಿಟ್ಟಿಸದ ನೂರು ಕನಸುಗಳನು ಹೊತ್ತು ನಡೆಯುವವ ನಾನು. ನಾನಿನ್ನೂ ಚಿಕ್ಕ ಹುಡುಗ. ಅಲ್ಲ! ನಾನಿನ್ನೂ ಮೀಸೆ ಚಿಗುರುತಿರುವ ಬಾಲಕ ಅದರೊಳು ಹರೆಯದ ತಿಳುವಳಿಕೆಯಿಂದ ಕೂಡಿದ ಹುಡುಗ. ನಿನ್ನೆ ತಾನೇ ಬರೆಯ ಪ್ರಾರಂಭಿಸಿದವನು. ನಿಮ್ಮಷ್ಟೂ ಜ್ಙಾನಿ ನಾನಲ್ಲ. ಕಾಸಿಮನ ಮಾತಿನ ಲೋಪದೊಷಗಳ ತಿಳಿಸಲು ಮರೆಯಬೇಡಿ. ಹೇಗಿದ್ದರೂ ನಿಮ್ಮ ಅಭಿಪ್ರಾಯವನು ನೋಂದಾಯಿಸಿ ಬಿಡಿ. ಚೆನ್ನವಾಗಿದ್ದರೂ ಚೆನ್ನವಾಗಿಲ್ಲದಿದ್ದರೂ ತಾವು ನೋಡಿದರೆನ್ನುವ ಸಂತೋಷ… ಸಾಹಿತ್ಯ ತೋಟದಲಿ ಗುಲಾಬಿ ಗಿಡವೊಂದು ನಡಬೇಕೆಂಬ ಆಸೆ. ಅಂಕು ಡೊಂಕಿನ ಹಾದಿಯಲಿ ಡಂಗೂರ ಬಾರಿಸುತ ಮುಂದೆ ಸಾಗುಬೇಕೆಂಬ ಆಸೆ. ಎಲ್ಲೋ ನಡೆಯುವ ಶೋಷಣೆಯ ವಿರುದ್ಧ ನನ್ನದೊಂದು ಚಿಕ್ಕ ಧ್ವನಿ ಯಾಗಬೇಕೆಂಬ ಆಸೆ. ಹುಣ್ಣಿಮೆಯ ರಾತ್ರಿ ಯಲಿ ನನೊಂದು ಮಿನುಗುಹುಳವಾಗಬೇಕೆಂಬ ಆಸೆ.

ಪ್ರೀತಿ ತೋರಿದವನ ಜೊತೆ ಪ್ರೀತಿಯ ಪ್ರತಿಬಿಂಬವಾಗಬೇಕು. ನನ್ನ ದ್ವೇಷಿಸಿದವನ ತಿರುಗಿ ದ್ವೇಷಿಸಲು ನನಗೆ ಸಮಯವಿಲ್ಲ. ಯಾಕೆಂದರೆ ನನ್ನ ಪ್ರೀತಿಸಿದವನ ಪ್ರೀತಿಸುವೂದರಲಿ ಮಗ್ನ ನಾಗಿರುವೆ. ನನ್ನ ಮಾತಿಗೆ ಕಿವಿಯಾಲಿಸಿದ ನಿಮ್ಮ ಪ್ರೀತಿಗೆ ನನ್ನ ಪ್ರೀತಿಯ ಪ್ರೀತಿಯಿಂದ ಕೃತಜ್ಞತೆಗಳು..

ಇಂತೀ ಪ್ರೀತಿಯಿಂದ ಕಾಸಿಂ

=======================================

ಕಾಸಿಂ ಎಂ.ಕೆ

technokasim@gmail.com

Twitter

Facebook

=========================================

ಸಾಮಾಜಿಕ ತಾಣವಾದ Facebook ನ ಪುಟ
ಬ್ಲೂವೇವ್ಸ್ ಹಮ್ಮಿಕೊಂಡಿದ್ದ ನಿಕ್ಷೇಪ ೨೦೧೪-೧೫ ಲೇಖನ ಸ್ಪರ್ಧೆಯಲ್ಲಿ ಯುವಜನತೆಸಾಮಾಜಿಕ ತಾಣ ಉಪಯೋಗಿಸಬೇಕಾದ ಪರಿ ಮತ್ತು ದಾರಿ ತಪ್ಪುತ್ತಿರುವ ರೀತಿ ಎಂಬ ವಿಷಯದ ಲ್ಲಿ ಪ್ರಷಸ್ತಿ ಪಡೆಯುತ್ತಿರುವೂದು

image

=========================================

image

ನಿಮ್ಮ ಟಿಪ್ಪಣಿ ಬರೆಯಿರಿ